ಪಿಡಿದರಿವಿನೊಳ್ಮಾಗು
ಹುಡುಕುವೇನನು ಮರುಳೆ ಎಲ್ಲವಿರೆ ನಿನ್ನೊಳಗೆ!
ಹಿಡಿಯೆ ಹವಣಿಸುವೇನ ನಿನ್ನಲ್ಲೆ ನೋಡ !
ಹುಡುಕುವೆಡೆ ಹಿಡಿದುದಂ ಮರೆತು ಸಾರ್ದಪುದೇನ?
ಪಿಡಿದರಿವಿನೊಳ್ಮಾಗೊ ಜಾಣಮೂರ್ಖ//
ನಾವಂತೂ ಜೀವನದ ತುಂಬ ಬರೀ ಹುಡುಕುತ್ತಲೇ ಇರುತ್ತೇವೆ. ಎಲ್ಲಿ , ಏನನ್ನು ಹುಡುಕುತ್ತಿದ್ದೇವೆ ಅನ್ನೋದು ಮಾತ್ರ ಕೊನೇವರೆಗೂ ಗೊತ್ತಾಗೊಲ್ಲ. ಆದರೆ ವಿಪರ್ಯಾಸ ಎಂದರೆ ಬೇಕಾದುದೆಲ್ಲವೂ ನಮ್ಮೊಳಗೇ ಇರುತ್ತದೆ. ನಮ್ಮನ್ನು ಮೀರಿ ಲೌಕಿಕದ ಬಲೆಗೆ ಬಿದ್ದು , ಸಿಕ್ಕಿ ನರಳಿ , ಏನನ್ನೋ ಹಿಡಿಯೆ ಹೊರಟ ಭಾವದಲ್ಲಿ ಸುಮ್ಮನೆ ತೊಳಲಾಡುತ್ತೇವೆ. ನೀವೇ ನೋಡಿ ಗೆಳೆಯರೇ ಲೌಕಿಕ ಭೋಗ ಭಾಗ್ಯಗಳು ನೂರಕ್ಕೆ ನೂರರಷ್ಟು ತೃಪ್ತಿಯನ್ನು ಎಂದೂ ನೀಡವು ಎಂದು ತಿಳಿದಿದ್ದರೂ ಸಹ ಅವುಗಳಿಗಾಗಿಯೇ ಕೊರಗಿ , ಅವುಗಳ ಹಿಂದೆಯೇ ಓಡುವುದು ವಿಪರ್ಯಾಸವಲ್ಲವೇ ? ಈ ಹುಡುಕುವ ಮತ್ತು ಹಿಡಿಯುವ ಭರದಲ್ಲಿ ನಾವು ಈಗಾಗಲೇ ಪಡೆದ ಅರಿವನ್ನೂ ಮರೆತು ಅದರಲ್ಲೇ ನೆಲೆಯಾಗಿ ನಿಲ್ಲಲಾಗದೆ ತೊಳಲಾಡುತ್ತೇವೆ. ಅದರೆ ನಾವು ಪಡೆದ ಅರಿವನ್ನೇ ಬದುಕಿನೊಂದಿಗೆ ನಾದು ಮಾಗಬೇಕು. ಈ ಮಾಗುವಿಕೆಯೇ ನಮ್ಮನ್ನು ಮೋಕ್ಷದೆಡೆಗೆ ಕೊಂಡೊಯ್ಯುವ ಸಾಧನವಾಗುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021