ಸಿರಿವಂತನಾಗಲ್ಕೆ ಅರಿ ಮೊದಲು ಸಿರಿಯರ್ಥ
ಸಿರಿಯೆಂದೊಡೇನು ಬಲು ಬಂಗಾರ ಧನವೆ ?
ಸಿರಿ ಕನಕಮಲ್ತು ಭೌತಿಕಮಂತುಮಲ್ತಲ್ತು
ಸಿರಿ ದುಡಿವ ಮನ ಕಾಣೊ ಜಾಣಮೂರ್ಖ//
‘ಸಿರಿ’ ಏನು ಹೀಗಂದರೆ !? ಧನ ಕನಕ ! ಆಸ್ತಿಪಾಸ್ತಿ ! ಒಡವೆ ವಸ್ತು ! ನಾವು ಇವುಗಳನ್ನೆಲ್ಲಾ ಸಿರಿ ಎನ್ನುತ್ತೇವೆ. ಅದರಲ್ಲೇನೂ ತಪ್ಪಿಲ್ಲ ಬಿಡಿ. ಇವುಗಳನ್ನು ಹೊಂದಿರುವವರನ್ನು ಸಿರಿವಂತರು ಎನ್ನುತ್ತೇವೆ. ಆದರೆ ಅಂತಹಾ ಸಿರಿವಂತರಲ್ಲೇ ಸಿರಿ ಸೇರಲು ಕಾರಣವೇನು !? ಸ್ವಲ್ಪ ಯೋಚಿಸಿ ! ಅದೇನೂ ತಾನಾಗೇ ಬಂದು ಸೇರಿರೋದಿಲ್ಲ. ಅದು ಅವರ ದುಡಿಮೆಯ ಫಲವಾಗಿರುತ್ತದೆ. ಅವರಲ್ಲಿ ಮೈಮುರಿದು ದುಡಿಯಬೇಕು ಎನ್ನುವ ಮನಸ್ಸಿದೆಯಲ್ಲಾ ಅದೇ ನಿಜವಾದ ಸಿರಿ ! ಆ ಮನಸ್ಸಿಲ್ಲದಿದ್ದರೆ ಈ ಭೌತಿಕವಾದ ಸಿರಿ ಸಿರಿವಂತರ ಬಳಿ ಸೇರುತ್ತಿತ್ತಾದರೂ ಹೇಗೆ !? ಆದ್ದರಿಂದ ಸ್ವಲ್ಪ ಸೂಕ್ಷ್ಮವಾಗಿ ಯೋಚಿಸೋಣ. ಭೌತಿಕವಾದದ್ದು ಸಂತೋಷ ನೀಡುತ್ತದೆ ಅಷ್ಟೆ. ಆದರೆ ಅದೇ ಸಿರಿಯಲ್ಲ. ಆದರೆ ಅದನ್ನು ಗಳಿಸಲು ಪ್ರೇರಕಶಕ್ತಿಯಾದ ಮನಸ್ಸಿದೆಯಲ್ಲಾ ಅದೇ ನಿಜವಾದ ಸಿರಿ ಎನ್ನುವುದೇ ಸರಿ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021