ಬತ್ತಿ ತಾನುರಿದಿಳೆಗೆ ಬೆಳಕೀವುದೈ ಕೆಳೆಯ
ಎತ್ತಿ ಪಣತಿಯ ಬಣವೆಯಡಿಯೊಳಿಡಲೆಂತು
ಇತ್ತ ಬದುಕಲಿ ಬತ್ತಿ ಬೆಳಕಾಗು ಲೋಕದಾ
ಕತ್ತಲೆಯ ಕಳೆಯೇಳು ಜಾಣಮೂರ್ಖ//
ಈ ಜಗತ್ತಿನಲ್ಲಿ ಬತ್ತಿಯ ಬದುಕು ಧನ್ಯ ! ತಾನು ಉರಿದು ಜಗತ್ತನ್ನು ಬೆಳಗುತ್ತದೆ ಅದು. ಅದೇ ಪಣತಿಯನ್ನೇ ಮತ್ತೊಬ್ಬರ ಹುಲ್ಲಿನ ಬಣವೆಯ ಅಡಿಯಲ್ಲಿ ಒಯ್ದು ಇಟ್ಟರೆ ಇಡೀ ಬಣವೆಯೇ ಸುಟ್ಟು ಭಸ್ಮವಾಗುತ್ತದೆ. ಇದರಲ್ಲಿ ಪಣತಿಯ ತಪ್ಪೇನು !? ಹಾಗೆಯೇ ಬದುಕೂ ಕೂಡ ದುರುಪಯೋಗವಾಗಬಾರದು. ಭಗವಂತ ನೀಡಿದ ಬದುಕಿದು ಒಂದು ಭವ್ಯ ಉಡುಗೊರೆ. ಕಷ್ಟಗಳ ಒಟ್ಟಿಗೇನೇ ಇದ್ದು ನಾವೂ ಬೆಳಗಿ ಜಗತ್ತನ್ನೂ ಬೆಳಗಬೇಕು. ಅಜ್ಞಾನವೆಂಬ ಕತ್ತಲೆಯನ್ನು ಕಳೆಯಬೇಕು. ನಾವೊಂದು ಪ್ರಣತಿಯಾಗಬೇಕು ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021