ಇಂದಿಗಿಂತಲು ನಾಳೆ
ಚಂದವೆನ್ನುವ ಬೆಮೆಯೊ
ಳಿಳೆಯ ಬಾಳ್ ಕಳೆಯುತಿದೆ
ನಾಳೆ ತಿಳಿಯದಲೆ !
ನಿನ್ನೆ ಮೊನ್ನೆಗಳೆಲ್ಲ
ಇಂತೆ ಸಾಗಿತು ಬದುಕೊ !
ಈ ಕ್ಷಣವೆ ನಿಜದ ಬಾಳ್
ಜಾಣಮೂರ್ಖ //
ಇಂದಿಗಿಂತಲೂ ನಾಳೆ ಸುಂದರವಾಗಿರುತ್ತದೆ ಎಂಬ ಭ್ರಮೆಯಲ್ಲಿ ಇಳೆಯ ಬದುಕು ಸಾಗುತ್ತಿದೆ. ಆದರೆ ವಾಸ್ತವವೇ ಬೇರೆ.ನಾಳೆ ಏನಾಗುತ್ತದೆಂದು ನಮಗೆ ಗೊತ್ತಿಲ್ಲ. ನಿನ್ನೆ ಮೊನ್ನೆಗಳೂ ಕೂಡ ನಮಗೆ ಗೊತ್ತಿಲ್ಲದಂತೆಯೇ ಸಾಗಿದವು. ಮುಂದಿನ ಭವಿತವ್ಯವೂ ಹೀಗೇ ಸಾಗುತ್ತದೆಯಷ್ಟೆ ! ಆದರೆ ವರ್ತಮಾನದಲ್ಲಿ ಬದುಕಯ್ಯಾ ಗೆಳೆಯ. ಈ ಕ್ಷಣ ಇದೆಯಲ್ಲಾ ಇದು ನಿಜವೂ ಹೌದು ! ಸುಂದರವೂ ಹೌದು ! ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021