ಸಲ್ಲದಾಟವ ತೊರೆಯೊ
ಕಲ್ಲ ಮೆಲ್ಲುವೆಯೇಕೆ ಕಲ್ಲು ಸಕ್ಕರೆಯಿಹುದು
ಮೆಲ್ಲು ಬಾರೆನ್ನುತಲಿ ಗುರುವು ತಾ ಕರೆಯೆ
ಇಲ್ಲ ಕಲ್ಲನೆ ಮೆಲ್ವೆನೆನುವ ಮೂರ್ಖನ ಪರಿಯ
ಸಲ್ಲದಾಟವ ತೊರೆಯೊ ಜಾಣಮೂರ್ಖ//
ಕಲ್ಲನ್ನೇಕೆ ತಿನ್ನುವಿರಿ ! ಬನ್ನಿ ನನ್ನ ಬಳಿ ಕಲ್ಲು ಸಕ್ಕರೆ ಇದೆ ಕೊಡುತ್ತೇನೆ. ತಿಂದು ಸವಿಯನ್ನು ಅನುಭವಿಸಿ ಸಿಹಿಯಾಗಿರಿ ಎಂದು ಸದ್ಗುರುವು ಕರೆಯುತ್ತಾನೆ. ಗುರುವಿನಲ್ಲಿ ನಂಬಿಕೆಯಿಡದ ನಾವು , ಇಲ್ಲ ! ನಾನು ಕಲ್ಲನ್ನೇ ತಿನ್ನುತ್ತೇನೆ, ಇದೇ ಚನ್ನಾಗಿದೆ ಎನುವ ಹುಂಬತನ ತೋರಿದರೆ ಗುರುವೇನು ಮಾಡುತ್ತಾರೆ ಹೇಳಿ !? ಸ್ನೇಹಿತರೇ , ಗುರುವು ಸದಾ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಮತ್ತು ದಡ ಸೇರಿಸಲು ಸುಂದರ ದಾರಿಗಳನ್ನು ತೋರಿಸುತ್ತಾನೆ. ಆದರೆ ನಮಗೆ ಬಯಸಿದುದು ತಕ್ಷಣವೇ ಸಿಕ್ಕಿಬಿಡಬೇಕು ! ಇದು ಹೇಗೆ ಸಾಧ್ಯ !? ನಮ್ಮ ಪ್ರಾರಬ್ಧಕರ್ಮಗಳು ಕಳೆಯಬೇಕಲ್ಲ ! ಇದು ಕಳೆಯಲು ಗುರುವಿನ ಗುಲಾಮನಾಗಬೇಕು ; ಅಲ್ಲಿಯ ವರೆಗೂ ದೊರೆಯದಯ್ಯಾ ಮುಕುತಿ ! ದಾಸವರೇಣ್ಯರುಗಳು ತಮ್ಮ ಕೀರ್ತನೆಗಳಲ್ಲಿ ಸಾರಿದುದು ಇದನ್ನೇ ! ಮುಖ್ಯ ನಂಬಿಕೆ ಬೇಕು ಅಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021