ತೇನವಿನಾ
ನಾನೆಂಬ ನಚ್ಚಿನೊಳ್ಕಣ್ಬಿಟ್ಟು ಸಾಗಲೇನ್ ?
ನಾನೆಂಬ ಪೊರೆಯಡರಿ ಎಡಹುವುದು ಖಚಿತ
ನೀನೆಂಬ ನಚ್ಚಿಂದ ಕಣ್ಮುಚ್ಚಿ ಸಾಗಿಬಿಡು
ತಾನೆ ಪೊರೆವನೊ ನಿಜದಿ ಜಾಣಮೂರ್ಖ //
ಯಾವುದೇ ಕೆಲಸವನ್ನೂ ನಾನು ಮಾಡುತ್ತಾ ಇದ್ದೀನಿ ಅಂತ ಖಂಡಿತ ಮಾಡಬೇಡಿ. “ತೇನವಿನಾ ತೃಣಮಪಿ ನಚಲತಿ” ಭಗವಂತನ ಆಜ್ಞೆ ಇಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡದು. ಈಗ ನಾನು ಮಾಡುತ್ತಿರುವ ಈ ಕೆಲಸಕ್ಕೂ ಭಗವಂತನ ಪ್ರೇರಣೆಯೇ ಮೂಲ ಕಾರಣವೆಂದು ತಿಳಿದು ಕಾರ್ಯವೆಸಗಿ. ನಾನು ಎಂಬ ಭಾವದಲ್ಲಿ ಕಣ್ಬಿಟ್ಟು ನಡೆದರೂ ಎಡವುತ್ತೇವೆ. ಇನ್ನು ‘ನಾನೇ’ ಎಂಬ ಪೊರೆಯಡರಿದರೆ ಎಡವದೇ ಇರುತ್ತೇವೆಯೇ ?ಎಲ್ಲವೂ ನೀನೇ ಎಂಬ ನಂಬಿಕೆಯಿಂದ ಕಣ್ಮುಚ್ಚಿ ನಡೆದರೂ ಸಹ ಅ ನೀನೆಂಬ ದಿವ್ಯ ಶಕ್ತಿ ಬೆಂಬಿಡದೆ ಕಾಯುತ್ತದೆ. ಇದರಲ್ಲಿ ಸಂದೇಹವೇ ಇಲ್ಲ. ಮುಖ್ಯ ನಂಬಿಕೆ ಬೇಕಷ್ಟೆ. ನಂಬಿಕೆ ಬಲು ದೊಡ್ಡದು. ಅದೇ ಇಲ್ಲದ ಮೇಲೆ ಬದುಕುವುದಾದರೂ ಎಂತು !? ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021