ಅಂದು ಗಜರಾಜ ತಾ ನೊಂದು ಕೂಗಲ್ಕೆ ಹರಿ
ಬಂದನೈ ಓಡೋಡಿ ಕರ ಪಿಡಿದು ಪೊರೆಯೆ !
ಇಂದು ಜಗ ಬೊಬ್ಬಿಡುತಲಿದೆ ಒಬ್ಬನಿಗು ಕಾಣ !
ಕುಂದೆಣಿಪ ಬಾವ ಬಿಡೊ ಜಾಣಮೂರ್ಖ //
ಗಜೇಂದ್ರ ಮೋಕ್ಷದ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ ! ಮೊಸಳೆಯು ಆನೆಯ ಕಾಲನ್ನು ಹಿಡಿದು ಎಳೆವಾಗ ಅದು ನಾರಾಯಣಾ ಎಂದು ಆರ್ತನಾಗಿ ಕೂಗಿದುದೇ ತಡ ಗರುಡಗಮನನಾಗಿ ಬರುತ್ತಿದ್ದ ಶ್ರೀಹರಿ ತನ್ನ ಸುದರ್ಶನದಿಂದ ಮೊಸಳೆಯ ಕತ್ತನ್ನು ಕತ್ತರಿಸಿ ಭಕ್ತನನ್ನು ಕಾಪಾಡಿದ. ಗಜದ ಕೂಗೊಂದಕೆ ಓಡೋಡಿ ಬಂದ ದೇವ ! ಇಂದು ಜಗವೇ ಬೊಬ್ಬಿಡುತ್ತಿದೆ ! ಆದರೆ ಹರಿ ಬರುತ್ತಿಲ್ಲವಲ್ಲ ! ಸ್ನೇಹಿತರೇ, ಶ್ರೀಹರಿಯಂತೂ ಬಂದಾಗಿದೆ. ನೋಡುವ ಕಣ್ಣು , ಹೃದಯ ಬೇಕಾಗಿದೆ ಅಷ್ಟೆ. ಬದುಕನ್ನು ಸ್ವಲ್ಪ ಸೂಕ್ಚ್ಮವಾಗಿ ನೋಡಬೇಕಿದೆ ಅಷ್ಟೆ. ಹರಿಯು ಇದ್ದಾನೋ , ಇಲ್ಲವೋ ಎಂಬ ಸಂಶಯದ ಭಾವದಲ್ಲೇ ಇದ್ದರೆ ಸಿಗುವನೇ ಹರಿಯು ! ಕಾಣಲು ಸಾಧ್ಯವೇ ಆ ಭಗವಂತನನ್ನು. ಮೊದಲು ಈ ಗೊಂದಲವನ್ನು ಬಿಟ್ಟು ಹೃದಯದ ಕಣ್ಣಿನಿಂದ ನೋಡಿ. ಖಂಡಿತ ಕಂಡೇ ಕಾಣುತ್ತಾನೆ ! ನಂಬಿದವರಿಗೆ ಭಗವಂತ ಇದ್ದೇ ಇದ್ದಾನೆ. ನಂಬಿಕೆ ಬೇಕಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021