ಜೀವನದ ವನಧಿ ತಾ ಚೈತ್ರದೊಳ್ ನಲಿಯಲೈ
ಬೇವು ಬೆಲ್ಲವ ಮೆದ್ದು ತಣಿಯಲೈ ಮನವು !
ಪ್ಲವವು ವಿಪ್ಲವಿಸಿ ಬಾಳ್ ಸಂತಸದೊಳಾಡಲೈ
ಕವಿದಂಧಕಾರ ತೂರ್ ಜಾಣಮೂರ್ಖ//
ಸ್ನೇಹಿತರೇ , ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬಾಳ ಸಾಗರದಲ್ಲಿನ ಈ ಚೈತ್ರಾರಂಭವು ಎಲ್ಲರಲ್ಲೂ ಸಂತಸವನ್ನು ತರಲಿ. ಬೇವು ಬೆಲ್ಲವನ್ನು ಮೆದ್ದು ಎಲ್ಲರ ತನು ಮನಗಳು ತಣಿವಿನಿಂ ತುಂಬಲಿ ! ಈ ಪ್ಲವನಾಮ ಸಂವತ್ಸರವು ವಿಪ್ಲವಿಸಲಿ ! ಅರ್ಥಾತ್ ಚಿತ್ಕ್ರಾಂತಿ ಉಂಟಾಗಲಿ. ಅಂಧಕಾರವು ದೂರವಾಗಲಿ. ಬಾಳು ಬೆಳಗಲೆಂಬ ತುಂಬು ಹೃದಯದ ಹಾರೈಕೆಯೊಂದಿಗೆ….
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021