ಕಲ್ಲು ಸಕ್ಕರೆ ಬಣ್ಣದಾಕಾರವೆಂತಿರಲಿ
ಮೆಲ್ಲದನು ಕಣ್ಮುಚ್ಚಿ ಸವಿಯಲಾ ಸಿಹಿಯ !
ಬಲ್ಲೊಡೇಂ ಹೊತ್ತಗೆಯ ಅರಿವದೆಂತಿರಲಿ ಬಿಡು
ತಲ್ಲೀನನಾಗೇಳೊ ಜಾಣಮೂರ್ಖ//
ಕಲ್ಲು ಸಕ್ಕರೆಯನ್ನು ನೋಡಿದ್ದೇವಲ್ಲ ! ಎಷ್ಟು ಸಿಹಿ ! ಅದರ ಬಣ್ಣ ಆಕಾರ ಹೇಗೇ ಇರಲಿ. ಕಣ್ಮುಚ್ಚಿ ಸವಿಯಬೇಕಷ್ಟೆ. ಆಗಲೇ ಅದರ ಸಿಹಿಯ ಸವಿಯ ಅನುಭವವಾಗೋದು. ಹಾಗೇನೇ ನೂರಾರು ಪುಸ್ತಕಗಳನ್ನು ಓದಿಬಿಟ್ಟರಾಯ್ತೆ !? ಆ ಅರಿವನ್ನು ಅನುಭವಿಸೋದು ಬೇಡವೇ !? ಅದರ ಅನುಷ್ಠಾನವಾಗಬೇಕು. ಆ ಜ್ಞಾನದ ಅಗಾಧ ವಾರಿಧಿಯಲ್ಲಿ ಮೀಯಬೇಕು. ಆನಂದಭಾಷ್ಪಗಳ ಸುರಿಸಬೇಕು. ಜಗತ್ತಿನ ಕಷ್ಟ ಸುಖಗಳಿಗೆ ಮಿಡಿಯಬೇಕು. ಈ ಕೆಲಸವಾಗದಿದ್ದರೆ ಅಂತಹಾ ಓದು ವ್ಯರ್ಥವೇ ಸರಿ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021