ಮನದಹಮ ಕಳೆದು ಕರ್ಮವನೆಸಗು ಬಾಳಿನೊಳು
ನನದೆನದೆ ನಿನದೆನ್ನು ಸೇವೆ ಗುರಿಯಲ್ತೆ !?
ಚಣಚಣದ ಕರ್ಮ ದೇವನ ಪೂಜೆ ಭಾವದೊಳು
ಘನಭಾಗ್ಯವೆಂದು ಸಾರ್ ಜಾಣಮೂರ್ಖ //
ಓ ಗೆಳೆಯ , ಈ ಬದುಕಲ್ಲಿ ನಾನೆಂಬ ಅಹಂಕಾರವನ್ನು ಕಳೆಯಬೇಕಾದರೆ ಗೈವ ಪ್ರತಿಯೊಂದು ಕಾರ್ಯವೂ ನಿನ್ನದಯ್ಯಾ ಎಂಬ ಸಮರ್ಪಣಾ ಭಾವವಿರಲಿ !ನಿಸ್ವಾರ್ಥ ಸೇವೆ ಬಾಳಿನ ಗುರಿಯಾಗಿರಲಿ ! ಕ್ಷಣಕ್ಷಣದ ನಮ್ಮ ಕಾರ್ಯಗಳೆಲ್ಲವೂ ಭಗವದಾರಾಧನೆಯೆಂಬ ಭಾವದಲ್ಲೇ ನಡೆಯಲಿ ! ಇದು ನಮ್ಮ ಜೀವನದಲ್ಲಿ ಭಗವಂತನು ನೀಡಿರುವ ಭಾಗ್ಯ ಎಂಬ ಭಾವದಲ್ಲಿ ಕರ್ಮವೆಸಗಬೇಕು. ಇದರಿಂದ ಅಹಂಕಾರ ಮಮಕಾರಗಳು ಕಳೆದು ಮನಸ್ಸು ಪರಿಶುದ್ಧವಾಗುತ್ತದೆ. ಸಾಕ್ಷಾತ್ ಭಗವಂತನೇ ಕರ್ಮದಲ್ಲಿ ಮಗ್ನನಾಗಿದ್ದಾನೆಂದ ಮೇಲೆ ನಮ್ಮದ್ಯಾವ ಲೆಕ್ಕ !? ಅಂದ ಹಾಗೆ ಈ ಸೃಷ್ಟಿಯನ್ನು ಹಾಗೇ ಗಮನಿಸಿ ! ಒಂದು ಕ್ಷಣವೂ ಸುಮ್ಮನಿಲ್ಲ ! ಅಲ್ಲವೇ ! ಹಾಗೇ ನಾವೂ ಸಹ ಸದ್ಧರ್ಮ , ಸತ್ಕಾರ್ಯ , ಸಚ್ಚಿಂತನೆಗಳಲ್ಲಿ ಬದುಕನ್ನು ಸಾರ್ಥಕವಾಗಿ ಕಳೆಯಬೇಕು. ಅಲ್ಲವೇ ಗೆಳೆಯರೇ ?!
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021