Write to us : Contact.kshana@gmail.com

ಹೊಸ ಚಿಗುರು

5
(1)

ನಾಳೆ ಯುಗಾದಿ. ಶಾರದತ್ತೆ  ಬಿಟ್ಟರೆ ಯಾರಿಗೂ ನೆನಪಿದ್ದಹಾಗಿಲ್ಲ. ಮಾಮೂಲಿನ ಬದುಕಿನಂತೆಯೇಎಲ್ಲರೂ ಆರಾಮದಲ್ಲಿ ಇದ್ದಾರೆ.ಒಬ್ಬೊಬ್ಬರೇ ಮನೆಯಿಂದ ಹೊರಡುತ್ತಿದ್ದಾರೆ.ಮೊಮ್ಮಗ ಅವನಹೆಂಡತಿ ಹೊರಟಾಗ ಶಾರದತ್ತಗೆ ಏನೂಅನಿಸಲಿಲ್ಲ.ಅವರು ಇದ್ದರೂ ಏನು ಗೊತ್ತಿದೆ ಅವರಿಗೆ ?ಮಗ ಹೊರಟಾಗ ಇವ್ನೂ ಹೊರಟನಲ್ಲ ಯಾಕೆಕೇಳೋಣ ಅನಿಸಿದರೂ  ಹೊರಡುವಾಗ ಯಾಕೆಅಪಶಕುನ ಹೇಳುವುದು ಸಂಜೆ ಬೇಗ ಬರುತ್ತಾನೆ. ಅವನಿಗೇನು  ಅಂತಾ ಕೆಲಸ ಅಂದುಕೊಂಡರುಸೊಸೆ ರೆಡಿಯಾಗಿ ಹೊರಬಂದಾಗ ಶಾರದತ್ತೆಗೆಗಾಬರಿಯಾಯಿತು . ಮರ್ತೇಬಿಟ್ಟಿದಾರೆ ಎನಿಸಿ  ಸುಮ್ಮನಿರಲಾರದೆ ನೀನೂ ಹೊರಟಿಯೇನೇ ಅಂತ  ಕೇಳಿಯೇ ಬಿಟ್ಟರು. ಅವಳು ಅಚ್ಚರಿಯಲ್ಲಿ ಯಾಕತ್ತೆಎಂದಳು. ನಾಳೆ ಯುಗಾದಿ ಮರೆತೇ ಹೋಯ್ತಾ? ಅದಕ್ಕೇನೀಗ? ಎಷ್ಟು ಕೆಲ್ಸವಿದೆ ಬಂದು ಮಾಡಕ್ಕಾಗುತ್ತಾ ? ಎಂತ ಕೆಲ್ಸಅಲ್ವೇ  ಕಡಬಿಗೆರೆಡಿ ಮಾಡಬೇಕು ಉದ್ದು ನೆನಸಿದ್ಯಾಹೋಳಿಗೆಗೆಬೇಳೆ ಬೇಯಿಸಬೇಕು. ಮಾವಿನೆಲೆ ತಂದಿದ್ಯಾ ಬೇವುಹೂವು ತರೂದ್ಯಾವಾಗ? ಅತ್ತೇ ಅದೆಲ್ಲ ಊರಲ್ಲಿ . ಇಲ್ಲಿಎಲ್ಲಾ ರೆಡಿಮೇಡ್‌ ಹೋಳಿಗೆ ಸುಬ್ಬಂಮ್ಮಂಗೆಹೇಳಿಯಾಗಿದೆ. ನಾಳೆ ಹತ್ತು ಹೋಳಿಗೆಕಳಿಸ್ತಾರೆ.ಮಾವಿನ ತೋರಣ ಹೋದವರ್ಷ ತಂದದ್ದು ಹೊಸದಾಗಿದೆ ತೆಗೆದಿಟ್ಟಿದೀನಿ.  ಅದನ್ನೇ ಕಟ್ಟಿದರಾಯ್ತು. ಅಡಿಗೆ ಜೋಯಸರಿಗೆ ಹೇಳಿದೀನಿ. ಐದು ಊಟತರ್ಲಿಕ್ಕೆ .ಎರಡು ಹೊತ್ತಗೆ ಸಾಕು.ಅವ್ರಿಗೇ ಸಣ್ಣ ಪ್ಯಾಕ್‌ಬೇವು ಬೆಲ್ಲ ತನ್ನಿ  ಅಂದಿದೀನಿತಲೆ ಬಿಸಿ ಮಾಡಬೇಡಿ. ನಾ ಹೊರಟೆಕೀ ತಿರುಗಿಸುತ್ತಾ ಹೊರಟೇ ಬಿಟ್ಟಳುಎಪ್ಪತ್ತೈದು ಸಂವತ್ಸರಗಳನ್ನು ತನ್ನ ಊರಲ್ಲೇ ಕಳೆದಶಾರದತ್ತೆನ, ಮಗ ಒಂದು ತಿಂಗಳ ಹಿಂದೆ ಒತ್ತಾಯದಲ್ಲಿಶಹರಿಗೆ  ಕರೆತಂದಿದ್ದಜಪ್ಪಯ್ಯಾ ಅಂದರೂ ಒಪ್ಪದ ಶಾರದತ್ತೆ ಹಬ್ಬದೊರೆಗೆ ಇರ್ತೀನಿ ಅಂತ ಕಂಡೀಷನ್‌ಹಾಕಿಯೇ  ಬಂದಿದ್ದರು. ಕಂಬಕ್ಕೊರಗಿ ಕುಳಿತವರಿಗೆ,ಯುಗಾದಿ ಸಂಬ್ರಮಗಳು ಅವರೆದೆಯಲ್ಲಿಬಧ್ರವಾಗಿದ್ದು ನೆನಪಿನ ಕಣಜದಲ್ಲಿದ್ದ ಚೆಂಡುಪುಟಿದೇಳುತ್ತಿದೆಈಗತಾನೇ ಚಿಗುರಿದ ತಿಳಿ ಹಸಿರುಮಾವಿನ ಎಲೆಗಳ ರಾಶಿ ಶಾರದತ್ತೆ ಭೂತಕಾಲದ ಶಾರಿ ಆಗಿದ್ದಾರೆ .ಅವಳೀಗ ಹಿಂಡು ಮಕ್ಕಳ ಧಂಡಿಗೆ ಲೀಡರ್‌ಒಂದೇಸೈಜಿನ ಎಲೆಗಳನ್ನು ಸೇರಿಸಿ ಕೊಡವಕೆಲಸ ಶಾರಿಯ ಅಂಡರ್‌ನಲ್ಲಿರುವ   ಕಿರಿಯರದುಅಪ್ಪ ಸ್ಟೂಲ್‌ ಹತ್ತಿ ಮೊದಲೇ ಮೊಳೆ ಹೊಡೆದು ಕಟ್ಟಿಟ್ಟದಾರಕ್ಕೆ ಶಾರಿ ಕೊಟ್ಟ ಎಲೆಗಳನ್ನು ಮಡಚಿ, ಕಡ್ಡಿ ಚುಚ್ಚಿ  ಆಚೀಚೆ ಬೇವಿನ ಗೊಂಚಲು ಇಳಿಬಿಟ್ಟರೆ ಅರ್ದಅಲಂಕಾರ ಆದಂತೆ . ಇನ್ನು ಅಮ್ಮ ಬಾಗಿಲೆದಿರು ಸಾರಿಸಿ ರಂಗೋಲಿ ಹಾಕಿ ಹೊಸಿಲು ಪೂಜೆ ಮಾಡಿದರೆ ಹೊಸವರ್ಷದ ಸ್ವಾಗತಕ್ಕೆ ಅಣಿಯಾಯಿತುಮತ್ತೆ ಒಬ್ಬೊಬ್ಬರೇ ಸ್ನಾನಮಾಡಿ ಬರುವುದು ಅಜ್ಜಿಯ ಬಳಿಗೆಕುಳಿತಅಜ್ಜಿಯ ಹಿಂದೆ ನಿಂತ ಅಪ್ಪ.  ಬರೆದಿಟ್ಟ ಹೆಸರು ನೋಡಿಹೊಸಬಟ್ಟೆ ಕೊಡವುದು. ಅಜ್ಜ ಅದನ್ನು ಎಲ್ಲರಿಗೂಕೊಡುವುದು ನಮಸ್ಕರಿಸಿ ತೆಗೆದುಕೊಳ್ಳುವುದುಮಕ್ಕಳಸರದಿ ಬಂದಾಗ ಕಣ್ಣುಗಳಲ್ಲಿ  ಕಾತರ ಸರದಿಯಲ್ಲಿ ನಿಂತಮಕ್ಕಳಲ್ಲಿ. ಶಾರಿ ಮೊದಲನೆಯವಳುಅವಳ ಗತ್ತೇಗತ್ತು. ಅಲ್ಲಿಂದ ಓಡಿ ಹೊಸಬಟ್ಟೆ ತೊಟ್ಟು, ದೇವರುಹಿರಿಯರಿಗೆ ನಮಸ್ಕಾರ ಮಾಡಿದರೆ,  ಅರ್ದ  ಹಬ್ಬಆದಂತೆ. ಅಪ್ಪ ಕೊಡುವ ಬೇವು ಬೆಲ್ಲ  ತಿನ್ನಬೇಕುಮುಖ ಸಿಂಡರಿಸುವಂತಿಲ್ಲ. ತ್ತೆ  ಹೋಳಿಗೆ ಊಟ. ಬಿಸಿಬಿಸಿ ಹೋಳಿಗೆ ಮೇಲೆ ಕಾಸಿದ ತುಪ್ಪ  ಹೊಟ್ಟೆಹಿಗ್ಗಿಸಿ  ತಿನ್ನುವದು. ಮತ್ತೆ  ಪಂಚಾಂಗ ಶ್ರವಣಬಹಳಕಷ್ಟದಲ್ಲಿ ಕುಳಿತು ವರ್ಷಭವಿಷ್ಯ ಕೇಳಲೇಬೇಕು.  ಎಷ್ಟುಹೊತ್ತಿಗೆ ಹೊರಗೆ ಹೋದೇನು ಓರಿಗೆಯವರಿಗೆ ಹೊಸಬಟ್ಟೆ ತೋರಿಸಿಯೇನು ಎನ್ನುವ ಕಾತರದಲ್ಲಿ  ಕಿವಿಗೆಗಾಳಿ ಬಿಟ್ಟಂತೆ ಓಡಿ ಹೊರಗೆ ಹೋದರೆ ಅಪ್ಪನದಪ್ಪಸ್ವರ ಬರಬೇಕು ಆಗ ಬರುವುದು.  ಶಾರಿಲಂಗದಾವಣಿ ತೊಟ್ಟದಾಳೆಏನೂಬದಲಾವಣೆಯಿಲ್ಲ.ವರ್ಷದಲ್ಲಿ ಎರಡಿದ್ದ  ಹೊಸ ಬಟ್ಟೆ  ಇನ್ನೆರಡು ಹಬ್ಬಗಳಿಗೂ ಬಂದಿದೆ. ಅಜ್ಜಿಯಿಲ್ಲ ಅಪ್ಪನೇಕೊಡುತ್ತಾರೆ  ಒಂದೇ ಮನೆ. ನಾಲ್ಕು ಸಂಸಾರ ಆಗಿದೆ. ಶಾರಿ ಸೀರೆಯುಡುತ್ತಾಳೆ . ಅಪ್ಪ ತರುವ ಸೀರೆ ಅವಳಿಗೆಹಿಡಿಸದು. ಅವರ ಬುದ್ದಿಮಾತು  ಹಿಡಸುವುದಿಲ್ಲ. ಮೂಗಿನ ತುದಿಯಲ್ಲಿ. ಕೋಪಶಾರಿ ಶಾರದೆಯಾಗಿ ಬೇರೊಬ್ಬರ ಮನೆಯ ಸೊಸೆಯಾಗಿದ್ದಾಳೆ. ಎರಡುಮಕ್ಕಳ ತಾಯಿಮನೆಯ ಯಜಮಾನಿ ಅಮ್ಮನ ಶಿಸ್ತು ಅಪ್ಪನ ಬುದ್ದಿವಾದ ಈಗ ಹಿತವೆನಿಸಿದೆಮಕ್ಕಳು ತೀರಾಕಳಪೆಯಲ್ಲ. ಹಬ್ಬ ಹರಿದಿನಗಳು ಹಿಂದಿನಂತೇನೆಡೆಯುತ್ತಿದೆಹೊಸಬಟ್ಟೆಗಳನ್ನು  ತರುವಾಗ ಮಕ್ಕಳೇಬರುತ್ತಾರೆ. ಶಾರದೆ ಶಾರದತ್ತೆ ಆಗಿ ಮಗ ಸೊಸೆ ದೂರದಶಹರದಲ್ಲಿ. ಉದ್ಯೋಗ ಮಾಡುತ್ತಿದ್ದಾರೆ . ಒಂದೇ ವರ್ಷಹಬ್ಬಕ್ಕೆ ಬಂದ ಸೊಸೆ  ಮತ್ತೆ ಹಬ್ಬ ಅವರೂರಲ್ಲೇಮಾಡುತ್ತಿದ್ದಾರೆಶಾರದತ್ತೆ ಒಂಟಿಯಾದಾಗಿಂದಾ  ಮಗ ಕರೆಯುತ್ತಿದ್ದಾನೆ . ಅವರ ಅಂತರಂಗಕ್ಕೆಗೊತ್ತಿದೆ ,ಅದು ಕಾಯಂ ಇರುವ ಜಾಗ ಅಲ್ಲವೆಂದುಈಸಾರಿ ಬಂದವ ಹಠಮಾಡಿ ಒಂದುತಿಂಗಳಿಗೆ ಕರೆತಂದಿದ್ದಾನೆಸೊಸೆಚೆನ್ನಾಗಿನೋಡಿಕೊಂಡಿದ್ದಾಳೆಆದರೆ ಶಾರದತ್ತೆಯಜೀವ ಊರಲ್ಲಿದೆ ನಾಲ್ಕು ಸಂಸಾರದವರೂ ಅಲ್ಲಿದ್ದಾರೆ ಕೆಲವು ಮಕ್ಕಳು ಹೊರಗಿದ್ದಾರೆ. ಮಗ ಕರೆದಾಗಲೇ ಅವರು ಪ್ರಪಂಚಕ್ಕೆಬಂದು ಎಚ್ಚರವಾಗಿದ್ದು. ಯುಗಾದಿ ಬಂದೇಬಿಟ್ಟಿತು .  ಎಲ್ಲಾ ಮಾಮೂಲಿನಂತೇ ಹೊಸದೇನಲ್ಲ. ಸ್ನಾನಮಾಡಿ  ದೇವರಿಗೆ ತಮಗೆ ಅಡ್ಡಬಿದ್ದದ್ದೊಂದೇ ವಿಶೇಷ.  ಶಾರದತ್ತೆ ಸ್ನಾನಮಾಡಿ ಹೊಸಸೀರೆ ಉಟ್ಟರುಗಿಡ ಮರಗಳೇ ಹೊಸ ಹಸಿರು ಸೀರೆಉಟ್ಟು ನಿಂತಿವೆ  ನಾವುಉಡದಿದ್ದರೆ ಹೇಗಾದೀತುತಂದಹೋಳಿಗೆ ಊಟ, ಪ್ಯಾಕೆಟ್ಟಲ್ಲಿದ್ದ ಬೇವು ಬೆಲ್ಲ ತಿಂದಶಾಸ್ತ್ರವಾಯಿತು.ಎಲ್ಲಾ ಅವರವರ ಪಾಡಿಗೆ ಹೊರಗೆಹೊರಟರುಶಾರದತ್ತೆ ತಮ್ಮ ಬಟ್ಟೆಬರೆಗಳನ್ನುತುಂಬಿಟ್ಟುಕೊಂಡರು. ಬಳಿಗ್ಗೆ ಹಠ ಹಿಡಿದು  ಹೊರಟೇಬಿಟ್ಟರು.  ಮನೆಗೆ ಬಂದಾಗ  ಮುಸ್ಸಂಜೆ ಎಲ್ಲರೂ ಸಂಬ್ರಮದಿಂದ ಸ್ವಾಗತಿಸಿದರು.  ಊಟಕ್ಕೆ ಎಲ್ಲರೂ ಕರೆದವರೇ. ಶಾರದತ್ತೆ ತಮ್ಮ ಮನೆ ಹೊಕ್ಕಾಗ ಎದಿರುತೋರಣವಿತ್ತು. ದೇವರದೀಪ. ಉರಿಯುತ್ತಿತ್ತು. ಶಾರದತ್ತೆ ಯನ್ನು ಮೈದುನನ ಸೊಸೆ ಕರೆಯಬಂದಳು. ಮತ್ತೆ ಶಾರಿಯಾದ ಹುರಪಲ್ಲಿ ಅವಳ ಹಿಂದೆನೆಡೆದರು.ಯುಗಾದಿ ಅವರ ಪಾಲಿಗೆ ಒಂದು ದಿನ ತಡವಾಗಿ ಬಂದಿತ್ತು .

How do you like this post?

Click on a star to rate it!

Average rating 5 / 5. Vote count: 1

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

SiriMurthy
Latest posts by SiriMurthy (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಯಜ್ಞ